ಕನ್ನಡಿಗ ಸದಾನಂದ ಕುಂದರ್( M D ಎಕ್ಸೆಲ್ ಇಂಡಿಯಾ ಪ್ರೊಟೆಕ್ಟಿವ್ ಪೇಂಟ್ಸ್ ಪ್ರೈ. ಲಿ)ಅವರಿಗೆ ಪ್ರತಿಷ್ಠಿತ ಜೀವಮಾನ ಸಾಧನಾ ಪ್ರಶಸ್ತಿ ಕೊಡಲಾಗಿದೆ.

 



" ನವಭಾರತದ ಬೆಳವಣಿಗೆಗೆ ಕೊಡುಗೆ ನೀಡಲು ಉದ್ಯಮಿಗಳು ಪ್ರಯತ್ನಿಸ ಬೇಕು"


..ಸದಾನಂದ ಕುಂದರ್


 


ಪೈಂಟ್ ಉದ್ಯಮಕ್ಕೆ ನಾನು ನೀಡಿದ ಸಾಧಾರಣ ಕೊಡುಗೆಯನ್ನು ಗುರುತಿಸಿ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನನಗೆ ನೀಡಿರುವುದು ಒಂದು ದೊಡ್ಡ ಗೌರವವಾಗಿದೆ.ಇದನ್ನು ಪಡೆದಿರುವುದು ನನ್ನ ಭಾಗ್ಯವಾಗಿದೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಉದ್ಯಮವನ್ನು ಶಕ್ತಿಶಾಲಿಯಾಗಿ ಬೆಳೆಸುವುದು ನಿಜವಾಗಿಯೂ ಚಾಲೆಂಜಿಂಗ್ ಆಗಿದೆ.ಅ ನಿಟ್ಟಿನಲ್ಲಿ ನಾನು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೇನೆ ಎಂದು ಪ್ರಸಿದ್ಧ ಉದ್ಯಮಿ ಸದಾನಂದ ಕುಂದರ್ ಹೇಳಿದರು.


ಅವರು ಐ.ಸಿ.ಟಿ ಮುಂಬಯಿ ಮತ್ತು ಕಲರ್ ಸೊಸೈಟಿ ಇತ್ತೀಚೆಗೆ ಮುಂಬಯಿಯಲ್ಲಿ ಜಂಟಿಯಾಗಿ ಆಯೋಜಿಸಿದ ಸಮ್ಮೇಳನದಲ್ಲಿ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.


ಈ ಪ್ರಶಸ್ತಿಯು ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿದೆ ಎಂದ ಸದಾನಂದ ಕುಂದರ್ ರವರು,ನವ ಭಾರತದ ಬೆಳವಣಿಗೆಗೆ ಕೊಡುಗೆ ನೀಡಲು ಉದ್ಯಮಿಗಳು ಶ್ರಮಿಸಬೇಕು ಎಂದರು.


ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಪುಷ್ಪ ಗೌರವ,ಪ್ರಶಸ್ತಿ ಫಲಕ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಪದ್ಮ ಭೂಷಣ,ಮಾಜಿ ನಿರ್ದೇಶಕರು ಐಸಿಟಿ, ಜೆ.ಬಿ ಜೋಶಿ ಮಾತನಾಡಿ,ಈ ಪ್ರಶಸ್ತಿಯು ಸದಾನಂದ ಕುಂದರ್ ರವರು ದಶಕಗಳ ಕಾಲದ ಪೈಂಟ್ ಉದ್ಯಮಕ್ಕೆ ನೀಡಿದ ಅಸಾಧಾರಣ ಕೊಡುಗೆಗಳ ಸಂಕೇತವಾಗಿದೆ.ಇದನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಶ್ಲಾಘನೀಯವಾದುದು ಎಂದು ಹೇಳಿ ಅಭಿನಂದಿಸಿದರು.


ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸೌಜನ್ಯ ಕಲರ್ ನ ಎಂ. ಡಿ ಪ್ರಿಯಾ ಭೂಮ್ಕರ್,ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿ.ನ ಸಿ.ಇ.ಒ ಹರಿಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಪ್ರತಿಷ್ಠಿತ ಈ ಪ್ರಶಸ್ತಿಯು ಈಗಾಗಲೇ ಪೈಂಟ್ ಉದ್ಯಮದ ಅಗ್ರಗಣ್ಯರಾಧ ಶ್ರೀ ಅಶ್ವಿನ್ ದಾನಿ (ASIAN PAINTS), ಶ್ರೀ ಸುಭಾಷ್ ದಾಂಡೇಕರ್ ( CAMLIN) ನಂತವರಿಗೆ ಸಂದಿದ್ದು, ಆ ಸಾಲಿಗೆ ಓರ್ವ ಕನ್ನಡಿಗರು ಸೇರ್ಪಡೆ ಆದದ್ದು ಅಭಿಮಾನದ ಸಂಗತಿಯಾಗಿದೆ.ಸದಾನಂದ ಕುಂದರ್ ರವರು ಪೈಂಟ್ ತಯಾರಿಕೆಯಲ್ಲಿ ಪ್ರಮುಖ ಉದ್ಯಮಿಯಾಗಿದ್ದಾರೆ.ಹಡಗು ನಿರ್ಮಾಣ ಮತ್ತು ONGC ಕಂಪನಿ CONTRACTOR ಕೂಡ ಆಗಿದ್ದಾರೆ. ಮನೆಯ ಬಡತನದಿಂದಾಗಿ 18 ರ ಹರೆಯದಲ್ಲೆ ಉಡುಪಿ (ಇನ್ನಂಜೆ) ಇಂದ ಮುಂಬಯಿ ಸೇರಿದ ಕುಂದರ್ ರವರು ಜೂನಿಯರ್ ಪೈಂಟಿಂಗ್ ಸೂಪರ್ವೈಸರ್ ದಿನ ಸಂಬಳಕ್ಕೆ ತನ್ನ ವೃತ್ತಿ ಜೀವನ ಆರಂಭಿಸಿದ್ದರು.ಜೀವನದಲ್ಲಿ ಸಾಧಿಸುವ ಗುರಿಯೊಂದಿಗೆ 1984 ರಲ್ಲಿ ಮೊತ್ತ ಮೊದಲ ಕಾರ್ಮಿಕ ಗುತ್ತಿಗೆಯನ್ನು ಪಡೆದರು.ಮುಂದೆ MAZGAON DOCK, L&T,CHOWGULE GROUP,TEBMA SHIPYARDS ಮತ್ತು INDIAN NAVY, COASTGUARD, ONGC, ನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಮುಖ ಗುತ್ತಿಗೆಗಳನ್ನು ಪಡೆದು ಅಗ್ರಗಣ್ಯ ಉದ್ಯಮಿಯಾಗಿ ಅಪಾರ ಯಶಸ್ಸನ್ನು ಗಳಿಸಿದ ಸದಾನಂದ ಕುಂದರ್ ಅವರ ಸಾಧನೆ ಪೈಂಟ್ ಉದ್ಯಮ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ಈ ಕ್ಷೇತ್ರದ ಹಿರಿಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.



Post a Comment

Previous Post Next Post